


ಹೆಚ್ಚಿನ ಜಾಹೀರಾತು ವಿದ್ವಾಂಸರೆಲ್ಲ ಇಂಗ್ಲಿಷಿಗೆ ಶರಣು ಹೋಗುವವರು. ಕನ್ನ್ನಡದ ಜಾಹಿರಾತುಗಳನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿ ಬಳಸುವವರು. ಕನ್ನಡದಲ್ಲೇ ಮೂಲ ಚಿಂತನೆಯುಳ್ಳ ಜಾಹಿರಾತುಗಳು ವಿರಳ. ಮಂಗಳೂರು ಮೂಲದ ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಜಾಹಿರಾತು ಸಂಸ್ಥೆ ಕನ್ನಡದಲ್ಲೆ ತಮ್ಮ ಗ್ರಾಹಕರ ಪರವಾಗಿ ಹಲವಾರು ಜಾಹಿರಾತು ಅಭಿಯಾನಗಳನ್ನು ರೂಪಿಸಿದ್ದು ಇಲ್ಲಿ ಕೆಲವನ್ನು ಪ್ರಕಟಿಸಲಾಗಿದೆ.
















ಮಣಿವಣ್ಣನ್ ಎಂಬ ಸಾವಿರಕ್ಕೊಬ್ಬನೇ ಇರುವ ಮಹಾನುಭಾವ ಹುಬ್ಬಳ್ಳಿ ಧಾರವಾಡ ಆಯುಕ್ತರಾಗಿದ್ದುಕೊಂಡು ಪುರೋಗಾಮಿ ಕೆಲಸಗಳನ್ನು ಕೈಗೊಂಡು ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಯನ್ನು ಮಾಡುತ್ತಿದ್ದಾಗ ಈ ಅಭಿಯಾನವನ್ನು ನಾವು (ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಜಾಹಿರಾತು ಸಂಸ್ಥೆ) ರಚಿಸಿ ಅವರಿಗೆ ತೋರಿಸಿದ್ದೆವು. ಕಾರಣಾಂತರಗಳಿಂದ ಇದು ಬೆಳಕು ಕಂಡಿಲ್ಲವಾದರೂ ಇದನ್ನು ರಚಿಸಲು ನಾವು ತುಂಬ ಶ್ರಮ ವಹಿಸಿದ್ದೇವೆ.
ನಮ್ಮ ಹುಬ್ಬಳ್ಳಿ ಪ್ರಮುಖ ಜಯಂತ್ ರವರ ಉತ್ತೇಜನದಂತೆ ಇದನ್ನು ರಚಿಸಲು ತಲೆಖರ್ಚು (Brain storm) ಮಾಡಲಾಯಿತು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮೂಡಲ ಮನೆ ಟಿ.ವಿ. ಧಾರಾವಾಹಿಯ ದೇಶಮುಖ್ ಪಾತ್ರವಹಿಸಿದ್ದ ರವೀ ಎಂದೆ ಕರೆಯಲ್ಪಡುವ ಕನ್ನಡದ ಜನಪ್ರಿಯ ನಟ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿಯವರು ಈ ಅಭಿಯಾನಕ್ಕೆ ರೂಪದರ್ಶಿಯಾಗಲು ಒಪ್ಪಿಕೊಂಡರು.
ಮೂಡಲ ಮನೆ ಚಿತ್ರೀಕಾರಣವಾಗುತ್ತಿದ್ದ ಹಾವೇರಿಯ ಬಳಿಯ ಹಂದಿಗನೂರಿನ ದೇಸಾಯಿ ವಾಡೆಯಲ್ಲಿ ಅವರ ಚಿತ್ರಗಳನ್ನು ಸೆರೆಹಿಡಿಯಲಾಯಿತು. ಶರಭೆಂದ್ರ ಸ್ವಾಮಿಯವರು ಮೊದಲೇ ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆಗಳನ್ನು ಬರ ಕೊಟ್ಟಿದ್ದರಿಂದ ನಾನು ಓದುತ್ತ ಹೋದೆ ರವೀ ಹಾವಭಾವಗಳನ್ನು ಮೂಡಿಸಿಕೊಂಡರು ರಮಾನಂದ ಪೈ ಕ್ಲಿಕ್ಕಿಸುತ್ತಲೇ ಇದ್ದರು. ಬರೆ ಅರ್ಧ ಗಂಟೆಯೊಳಗೆ ನೂರಕ್ಕೂ ಹೆಚ್ಚು ಭಾವಗಳನ್ನು ರವೀ ಮೂಡಿಸಿದರು.
ಈ ಅಭಿಯಾನ ಅವಧಿ ಸುಮಾರು ಒಂದು ತಿಂಗಳು. "ಅಸ್ತಿ ತೆರಿಗೆ ತುಂಬಿರೆನಪ?" ಅಂತ ಕಾಳಜಿಯಿಂದ ಕೇಳುವ ದೇಶಮುಖ್ (ರವೀ) ಎಲ್ಲ ಜಾಹಿರಾತು ಮಾಧ್ಯಮಗಳಲ್ಲೂ ಕೊಂಡಿಯಾಗಿ ಮೂಡಿ ಬರುವುದು ಈ ಅಭಿಯಾನದ ಇನ್ನೊಂದು ಅಂಶ.
ದಯವಿಟ್ಟು ಈ ಚಿತ್ರಗಳನ್ನು ಪುನರ್ಬಳಸಿದರೆ ಮ್ಯಾಗ್ನಂಗೂ ರವೀಯವರಿಗೂ ಹಣ ಕಳುಹಿಸಿ. ಪುಕ್ಕಟೆ ಬಳಸಿದರೆ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ.