Wednesday, October 22, 2008

3. ಒಂದು "ಹಾಲಿನ" ಕತೆ

ಇದು ನಡೆದದ್ದು ೨೦೦೩ರಲ್ಲಿ ದಿವಾಕರ ರೈ ಎಂಬ ಧೀಮಂತ ರೈತ ದ.ಕ. ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷನಾಗಿದ್ದಾಗ.
ಕರ್ನಾಟಕದ ಉಳಿದ ಸಂಘಗಳಿಗೆ ಹೋಲಿಸಿದರೆ ವೃತ್ತಿಪರತೆಯಲ್ಲಿ ಡಿ.ಕೆ.ಎಂ.ಯು.ಎಲ್. ಮುಂಚೂಣಿಯಲ್ಲಿತ್ತು.

ದಕ್ಷಿಣ ಕನ್ನಡದಲ್ಲಿ ಹಾಲು ಸಹಕಾರಿ ಚಳುವಳಿ ೧೯೮೬ರಲ್ಲಿ ಪ್ರಾರಂಭವಾಗಿದ್ದರೂ ಸಾಮಾನ್ಯ ಗ್ರಾಹಕನಿಗೆ ಅದರ ತಿಳಿವು ಹೆಚ್ಚಿರಲಿಲ್ಲ. ಹಾಲು ಮಂಡ್ಯದಿಂದಲೋ ಮೈಸೂರಿನಿಂದಲೋ ಬರುತ್ತಿರಬಹುದು ಎನ್ನುವ ಅಭಿಪ್ರಾಯ ಹೆಚ್ಚಿನವರಲ್ಲಿತ್ತು. ಅದು ದಕ್ಷಿಣ ಕನ್ನಡದ ರೈತರ ಕ್ರಾಂತಿ ಎನ್ನುವುದು ಜನರಿಗೆ ಮುಟ್ಟಬೇಕಾದ ಅಂಶವಾಗಿತ್ತು. ಖಾಸಗಿ ವಲಯದ ಕೆಲವು ಬ್ರಾಂಡುಗಳು ನೀಡುತ್ತಿದ್ದ ಪೈಪೋಟಿ ಬಹಳ ಕ್ಷೀಣವಾಗಿದ್ದರೂ ಜನ ಸಾಮಾನ್ಯರು ನಂದಿನಿ ಸೊರಗಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ನಿಜ ಸಂಗತಿ ಏನು ಎಂದು ತಿಳಿಯ ಪಡಿಸಿ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಕೆಲಸ ಅವಶ್ಯವಿತ್ತು. 

ಸಂಘವು ಮಾರುಕಟ್ಟೆಗೆ ನಂದಿನಿ Standardised ಹಾಲನ್ನು ಹೆಚ್ಚು ಗದ್ದಲವಿಲ್ಲದೆ ಬಿಡುಗಡೆ ಮಾಡಿದುದರಿಂದ ಮಾರುಕಟ್ಟೆಯಲ್ಲಿ ಅದರ ಬಗ್ಗೆ ಹೆಚ್ಚು ತಿಳಿವಿರಲಿಲ್ಲ. (Standardised ಹಾಲು ಟೊನ್ದ ಹಾಲಿಗಿಂತ ಹೆಚ್ಚು ಕೊಬ್ಬಿನಂಶ ಹೊಂದಿದ "ದಪ್ಪ ಹಾಲು"). ಖಾಸಗಿ ರಂಗದ ಎರಡು ಬ್ರಾಂಡ್ ಗಳು ಈ ವರ್ಗದಲ್ಲಿ ನಂದಿನಿಗಿಂತ ಹೆಚ್ಚು ಪ್ರಬಲವಾಗಿದ್ದವು. ಸಾಮಾನ್ಯ ಗ್ರಾಹಕರು ಹೆಚ್ಚು ಪ್ರಚಾರದಲ್ಲಿರುವ ನಂದಿನಿಯ Toned ಹಾಲನ್ನೂ ಖಾಸಗಿ ವಲಯದ Standardised ಹಾಲನ್ನು ಹೋಲಿಸಿ ನಂದಿನಿ ಹಾಲು ತೆಳು ಎನ್ನುವ ಅಭಿಪ್ರಾಯ ತಳೆದಿದ್ದರು. ಇದರಿಂದ ನಂದಿನಿಯ Toned ಹಾಲಿನ ಮಾರಾಟದಲ್ಲಿ ವ್ಯತ್ಯಯವಾಗದಿದ್ದರೂ ಬ್ರಾಂಡ್ ಮೌಲ್ಯ ಸೊರಗಿತ್ತು. ನಗರ ವಲಯದ ಗ್ರಾಹಕರು ಕ್ಷೀಣ ಪ್ರಮಾಣದಲ್ಲಿ ಖಾಸಗಿ ಬ್ರಾಂಡ್ ಗೆ ಪರಿವರ್ತಿತರಾಗುತ್ತಿದ್ದರು. 

ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಸಂಘವು ನಂದಿನಿಯ ಹೆಚ್ಚು ಬೆಲೆಯ "ಪೂರ್ಣ ಕೆನೆಯುಕ್ತ ಹಾಲನ್ನು" ಮಾರುಕಟ್ಟೆಗೆ ಬಿಡುಗಡೆ ಮಾಡಲೂ ಸಜ್ಜಾಗಿತ್ತು. ಈಗಾಗಲೇ ಗದ್ದಲವಿಲ್ಲದೆ ಮಾರುಕಟ್ಟೆಯಲ್ಲಿರುವ ನಂದಿನಿ Standardised ಹಾಲನ್ನು ಬಲಪಡಿಸದೆ ನಂದಿನಿ "ಪೂರ್ಣ ಕೆನೆಯುಕ್ತ ಹಾಲನ್ನು" ಬಿಡುಗಡೆ ಮಾಡಿದರೆ ಇದು ನೇರ ಖಾಸಗಿ ವಲಯದ Standardised ಹಾಲಿಗೆದುರಾಗಿ ಬಿದ್ದು ವಿಫಲವಾಗುವ ಅಪಾಯ ತೀವ್ರವಾಗಿತ್ತು. 

ಈ ಎಲ್ಲ ಹಿನ್ನೆಲೆಯನ್ನು ಗಮನದಲ್ಲಿರಿಸಿ ಒಂದು ಜಾಹಿರಾತು ಅಭಿಯಾನವನ್ನು ನಾವು ರಚಿಸಿ ದ.ಕ.ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ತೋರಿಸಿದ್ದೆವು. ಅದು ಅಹುದೆನಿಸಿಕೊಂಡು ಪ್ರಕಟವಾಗಿತ್ತು. 

ಬಳಿಕದ ವರ್ಷಗಳಲ್ಲೂ ನಾವು ನಂದಿನಿಗಾಗಿ ರಚಿಸಿದ ಹಲವು ಜಾಹಿರಾತು ವಿನ್ಯಾಸಗಳೂ ಇಲ್ಲಿವೆ.





Monday, September 22, 2008

2. ಮದುವೆಯ ಹಬ್ಬ : ಕೆಣಕು ಅಭಿಯಾನ

ಮಂಗಳೂರಿನ ಸ್ಯಾರಿ ಮತ್ತು ಗೋಲ್ಡ್ ಪ್ಯಾಲೇಸ್ ಎನ್ನುವ ಸಂಸ್ಥೆಯ ವಾರ್ಷಿಕ ವ್ಯಾಪಾರ ಮೇಳ "ಮದುವೆಯ ಹಬ್ಬ" ಮಂಗಳೂರು ಮೂಲದ ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಜಾಹಿರಾತು ಸಂಸ್ಥೆ ರೂಪಿಸಿದ್ದು. ಇದರ ಪ್ರೊಮೋಷನ್ಗೋಸ್ಕರ ೧೦ ದಿನದ ಕೆಣಕು ಅಭಿಯಾನವನ್ನು (Teaser Campain) ಹಮ್ಮಿಕೊಂಡಿತ್ತು. ಹರಿಣಿ ಕನ್ನಡದ ಪ್ರಸಿದ್ಧ ವ್ಯಂಗಚಿತ್ರಕಾರರು. ಹರಿಣಿಯವರ ರೇಖೆಗಳು ಮತ್ತು ಮ್ಯಾಗ್ನಂ ಚಿಂತನೆ.













1. ಹುಬ್ಬಳ್ಳಿ ಧಾರವಾಡ ಆಸ್ತಿ ತೆರಿಗೆ ಅಭಿಯಾನ



ಮಣಿವಣ್ಣನ್ ಎಂಬ ಸಾವಿರಕ್ಕೊಬ್ಬನೇ ಇರುವ ಮಹಾನುಭಾವ ಹುಬ್ಬಳ್ಳಿ ಧಾರವಾಡ ಆಯುಕ್ತರಾಗಿದ್ದುಕೊಂಡು ಪುರೋಗಾಮಿ ಕೆಲಸಗಳನ್ನು ಕೈಗೊಂಡು ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಯನ್ನು ಮಾಡುತ್ತಿದ್ದಾಗ ಈ ಅಭಿಯಾನವನ್ನು ನಾವು (ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಜಾಹಿರಾತು ಸಂಸ್ಥೆ) ರಚಿಸಿ ಅವರಿಗೆ ತೋರಿಸಿದ್ದೆವು. ಕಾರಣಾಂತರಗಳಿಂದ ಇದು ಬೆಳಕು ಕಂಡಿಲ್ಲವಾದರೂ ಇದನ್ನು ರಚಿಸಲು ನಾವು ತುಂಬ ಶ್ರಮ ವಹಿಸಿದ್ದೇವೆ.

ನಮ್ಮ ಹುಬ್ಬಳ್ಳಿ ಪ್ರಮುಖ ಜಯಂತ್ ರವರ ಉತ್ತೇಜನದಂತೆ ಇದನ್ನು ರಚಿಸಲು ತಲೆಖರ್ಚು (Brain storm) ಮಾಡಲಾಯಿತು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮೂಡಲ ಮನೆ ಟಿ.ವಿ. ಧಾರಾವಾಹಿಯ ದೇಶಮುಖ್ ಪಾತ್ರವಹಿಸಿದ್ದ ರವೀ ಎಂದೆ ಕರೆಯಲ್ಪಡುವ ಕನ್ನಡದ ಜನಪ್ರಿಯ ನಟ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿಯವರು ಈ ಅಭಿಯಾನಕ್ಕೆ ರೂಪದರ್ಶಿಯಾಗಲು ಒಪ್ಪಿಕೊಂಡರು.

ಮೂಡಲ ಮನೆ ಚಿತ್ರೀಕಾರಣವಾಗುತ್ತಿದ್ದ ಹಾವೇರಿಯ ಬಳಿಯ ಹಂದಿಗನೂರಿನ ದೇಸಾಯಿ ವಾಡೆಯಲ್ಲಿ ಅವರ ಚಿತ್ರಗಳನ್ನು ಸೆರೆಹಿಡಿಯಲಾಯಿತು. ಶರಭೆಂದ್ರ ಸ್ವಾಮಿಯವರು ಮೊದಲೇ ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆಗಳನ್ನು ಬರ ಕೊಟ್ಟಿದ್ದರಿಂದ ನಾನು ಓದುತ್ತ ಹೋದೆ ರವೀ ಹಾವಭಾವಗಳನ್ನು ಮೂಡಿಸಿಕೊಂಡರು ರಮಾನಂದ ಪೈ ಕ್ಲಿಕ್ಕಿಸುತ್ತಲೇ ಇದ್ದರು. ಬರೆ ಅರ್ಧ ಗಂಟೆಯೊಳಗೆ ನೂರಕ್ಕೂ ಹೆಚ್ಚು ಭಾವಗಳನ್ನು ರವೀ ಮೂಡಿಸಿದರು.

ಈ ಅಭಿಯಾನ ಅವಧಿ ಸುಮಾರು ಒಂದು ತಿಂಗಳು. "ಅಸ್ತಿ ತೆರಿಗೆ ತುಂಬಿರೆನಪ?" ಅಂತ ಕಾಳಜಿಯಿಂದ ಕೇಳುವ ದೇಶಮುಖ್ (ರವೀ) ಎಲ್ಲ ಜಾಹಿರಾತು ಮಾಧ್ಯಮಗಳಲ್ಲೂ ಕೊಂಡಿಯಾಗಿ ಮೂಡಿ ಬರುವುದು ಈ ಅಭಿಯಾನದ ಇನ್ನೊಂದು ಅಂಶ.

ದಯವಿಟ್ಟು ಈ ಚಿತ್ರಗಳನ್ನು ಪುನರ್ಬಳಸಿದರೆ ಮ್ಯಾಗ್ನಂಗೂ ರವೀಯವರಿಗೂ ಹಣ ಕಳುಹಿಸಿ. ಪುಕ್ಕಟೆ ಬಳಸಿದರೆ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ.